ಗ್ರಾಮ ಸಹಾಯಕಗೆ ಕೊರೋನ: ಉಡುಪಿ ತಾಲೂಕು ಕಚೇರಿ ಬಂದ್
ಉಡುಪಿ, ಜು.14: ಉಡುಪಿ ತಾಲೂಕು ಕಚೇರಿಗೆ ಬಂದು ಹೋಗಿರುವ ಗ್ರಾಮ ಸಹಾಯಕರೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿರುವುದು ಇಂದು ಧೃಡಪಟ್ಟಿದೆ.
ಹಿರೇಬೆಟ್ಟುವಿನ ಇವರಿಗೆ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಪತ್ನಿಯ ಮೂಲಕ ಬಂದಿರಬಹುದೆಂದು ಶಂಕಿತಲಾಗಿದೆ. ಈ ಹಿನ್ನೆಲೆಯಲ್ಲಿ ಇವರ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ. ಕರ್ತವ್ಯ ನಿಮಿತ್ತ ಇವರು ತಾಲೂಕು ಕಚೇರಿಗೆ ಆಗಮಿಸಿರುವುದರಿಂದ ಜು.15ರಂದು ಕಚೇರಿಯನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಪ್ರಭಾರ ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ.
Next Story