ಗ್ರಾಮ ಸಹಾಯಕರಿಗೆ ಕೊರೋನ ಪಾಸಿಟಿವ್: ಉಡುಪಿ ತಾಲೂಕು ಕಚೇರಿ ಬಂದ್
ಉಡುಪಿ, ಜು.14: ಉಡುಪಿ ತಾಲೂಕು ಕಚೇರಿಗೆ ಬಂದು ಹೋಗಿರುವ ಗ್ರಾಮ ಸಹಾಯಕರೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿರುವುದು ಇಂದು ಧೃಡಪಟ್ಟಿರುವುದರಿಂದ ಕಚೇರಿಯನ್ನು ಎರಡು ದಿನಗಳ ಕಾಲ ಬಂದ್ ಮಾಡ ಲಾಗಿದೆ.
ಹಿರೇಬೆಟ್ಟುವಿನ ಇವರಿಗೆ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಪತ್ನಿಯ ಮೂಲಕ ಬಂದಿರಬಹುದೆಂದು ಶಂಕಿತಲಾಗಿದೆ. ಈ ಹಿನ್ನೆಲೆಯಲ್ಲಿ ಇವರ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ.
ಇವರು ತಾಲೂಕು ಕಚೇರಿಗೆ ಬಂದು ಕೆಲಸ ನಿರ್ವಹಿಸಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಮಿನಿ ವಿಧಾನಸೌಧ ಮತ್ತು ಹಳೆ ತಾಲೂಕು ಕಚೇರಿಯ ಕಟ್ಟಡವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುವುದು. ಆದುದರಿಂದ ಜು.15 ಮತ್ತು 16ರಂದು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯ ನಿರ್ವಹಿಸುವುದಿಲ್ಲ ಮತ್ತು ಸಾರ್ವಜನಿಕರ ಪ್ರವೇಶ ವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ತಹಶೀಲ್ದಾರ್ ಪ್ರಕಟಣೆ ತಿಳಿಸಿದೆ.
Next Story