ಮಲ್ಪೆ: ವಿದ್ಯಾರ್ಥಿನಿ ಆತ್ಮಹತ್ಯೆ
ಮಲ್ಪೆ, ಜು.16: ಕಡೆಕಾರು ಗ್ರಾಮದ ಕಪ್ಪೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯೊಬ್ಬಳು ಜು.15ರಂದು ಸಂಜೆ ವೇಳೆ ವೈಯಕ್ತಿಕ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಬಾದಾಮಿ ಮೂಲದ ಲಕ್ಷ್ಮೀ ಮುದ್ನೂರು(17) ಎಂದು ಗುರುತಿಸಲಾಗಿದೆ. ಈಕೆ ಉಡುಪಿ ಸರಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಸುಮಾರು 3 ತಿಂಗಳಿನಿಂದ ಲಾಕ್ಡೌನ್ ನಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿ ಉಳಿದು, ತೋಟದಲ್ಲಿ ಕೆಲಸ ಮಾಡಿ ಕೊಂಡಿದ್ದರು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story