ಉತ್ತರ ಕನ್ನಡದಲ್ಲಿ ಮಂಗಳವಾರ 109 ಮಂದಿಗೆ ಕೊರೋನ ಸೋಂಕು ದೃಢ
ಕಾರವಾರ,ಜು.21: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮಂಗಳವಾರ 109 ಪ್ರಕರಣಗಳು ದಾಖಲಾಗಿದೆ.
ಈ ಪೈಕಿ ಜಿಲ್ಲೆಯ ಭಟ್ಕಳದಲ್ಲಿ 5, ಹಳಿಯಾಳ 44, ಹೊನ್ನಾವರ 13, ಜೊಯಿಡಾ 2, ಕಾರವಾರ 8, ಕುಮಟಾ 7, ಮುಂಡಗೋಡ 6, ಸಿದ್ದಾಪುರ 1, ಶಿರಸಿ 22 ಹಾಗೂ ಯಲ್ಲಾಪುರದಲ್ಲಿ 1 ಪ್ರಕರಣ ದೃಢಪಟ್ಟಿದೆ.
ಇದರಿಂದ ಜಿಲ್ಲೆಯಲ್ಲಿ 1272 ಪ್ರಕರಣಗಳ ದಾಖಲಾಗಿದ್ದು 742 ಪ್ರಕರಣಗಳು ಸಕ್ರಿಯವಾಗಿದೆ. ಈವರೆಗೆ 520 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ 35 ಮಂದಿ ಆಸ್ಪತ್ರೆಯಂದ ಬಿಡುಗಡೆಯಾಗಿದ್ದಾರೆ. ವಿವಿಧ ತಾಲೂಕಿನ ಕೋವಿಡ್ ವಾರ್ಡ್ ನಲ್ಲಿ ದಾಖಲಾಗಿದ್ದವರ ಪೈಕಿ ಅಂಕೋಲಾ 5, ಭಟ್ಕಳದ 21, ಹೊನ್ನಾವರ 5, ಕಾರವಾರ 2, ಕುಮಟಾದಲ್ಲಿ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 10 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
Next Story