ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 88 ಕೊರೋನ ಪಾಸಿಟಿವ್ ಪ್ರಕರಣ ಪತ್ತೆ
ಕಾರವಾರ,ಜು.24: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ 88 ಪ್ರಕರಣಗಳು ದೃಢಪಟ್ಟಿದೆ.
ಈ ಪೈಕಿ ಅಂಕೋಲಾ 1, ಕುಮಟಾ 30, ಹೊನ್ನಾವರ 4, ಭಟ್ಕಳ 3, ಶಿರಸಿ 23, ಸಿದ್ದಾಪುರ 4, ಮುಂಡಗೋಡ 7, ಹಳಿಯಾಳ 14 ಹಾಗೂ ಜೊಯಿಡಾದಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟೂ 1506 ಪ್ರಕರಣಗಳು ದಾಖಲಾಗಿದೆ.
ಈ ನಡುವೆ 53 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಂಕೋಲಾ ತಾಲೂಕಿನ 15, ಕಾರವಾರ 4, ಕುಮಟಾ 12, ಹೊನ್ನಾವರ 5, ಶಿರಸಿ 1, ಸಿದ್ದಾಪುರ 1, ಹಳಿಯಾಳದಲ್ಲಿ 15 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಸಹ ಇನ್ನೊಂದು ಕಡೆ ಸೋಂಕಿತರು ಗುಣಮುಖರಾಗುತ್ತಿರುವುದು ಜನರಲ್ಲಿ ಸಮಾಧಾನ ತಂದಿದೆ.
Next Story