ಕುಂದಾಪುರ: ಬೈಕ್ ಪಲ್ಟಿ; ಸಹಸವಾರ ಮೃತ್ಯು
ಕುಂದಾಪುರ, ಜು.26: ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸಹ ಸವಾರರೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿ ಗ್ರಾಮದ ಸುಳ್ಸೆ ಕ್ರಾಸ್ ಬಳಿ ಜು.25ರಂದು ಸಂಜೆ 5.15ರ ಸುಮಾರಿಗೆ ನಡೆದಿದೆ.
ಮೃತರನ್ನು ಮಾಧವ ಎಂದು ಗುರುತಿಸಲಾಗಿದೆ. ಇವರು ಅಣ್ಣಪ್ಪ ಎಂಬವರ ಬೈಕಿನಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಲ್ಲಿ ಬರುತ್ತಿದ್ದ ಕಾರನ್ನು ನೋಡಿ, ಅಣ್ಣಪ್ಪ ಬೈಕ್ನ್ನು ರಸ್ತೆಯ ಅಂಚಿಗೆ ಚಲಾಯಿಸಿದರು. ಆಗ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡರೆನ್ನಲಾಗಿದೆ.
ಇದರಲ್ಲಿ ಗಂಭೀರವಾಗಿ ಗಾಯಗೊಂಡ ಮಾಧವ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story