ಮಂಗಳೂರು: ನಾಪತ್ತೆಯಾಗಿದ್ದ ಮಹಿಳೆ ಬಾವಿಯಲ್ಲಿ ಶವವಾಗಿ ಪತ್ತೆ
ಮಂಗಳೂರು, ಜು.28: ಮನೆಯಿಂದಲೇ ರಾತ್ರೋರಾತ್ರಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯು ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಪತ್ತೆಯಾದ ಮೃತದೇಹವು ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಕೊಲ್ಲಬೆಟ್ಟು ನಿವಾಸಿ ಆಶಾಲತಾ (36) ಎಂಬವರದ್ದು ಎಂದು ತಿಳಿದುಬಂದಿದೆ.
ಮಹಿಳೆಯು ಜು.26ರಂದು ರಾತ್ರಿ ಊಟ ಮಾಡಿ ಮಲಗಿದ್ದರು. ಇವರು ಮರುದಿನ (ಜು.27) ನಸುಕಿನಜಾವದಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು. ಗಾಬರಿಗೊಂಡ ಕುಟುಂಬಸ್ಥರು ನೆರೆಹೊರೆ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದರು. ನಂತರ ಮಹಿಳೆಯ ಪತಿಯು ಬಜ್ಪೆ ಠಾಣೆಗೆ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ಆಶಾಲತಾ ಕೊಲ್ಲಬೆಟ್ಟುವಿನ ಮನೆಯ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ.
Next Story