ಮಂಗಳೂರು: ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ; ಭಾಗಶಃ ಸುಟ್ಟು ಕರಕಲು
ಮಂಗಳೂರು, ಜು.30: ಆಕಸ್ಮಿಕ ಬೆಂಕಿ ತಗಲಿ ಗುಜರಿ ಅಂಗಡಿ ಭಾಗಶಃ ಹೊತ್ತಿ ಉರಿದ ಘಟನೆ ಮಂಗಳೂರಲ್ಲಿ ಇಂದು ಮುಂಜಾನೆ ನಡೆದಿದೆ.
ಮಂಗಳೂರು ನಗರದ ಬಂದರು ಸಮೀಪದ ಬಿ.ಬಿ ಅಲಾಬಿ ರಸ್ತೆಯಲ್ಲಿರುವ ಗುಜರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿದೆ. ಪರಿಣಾಮ ಅಂಗಡಿ ಭಾಗಶಃ ಸುಟ್ಟು ಕರಕಲಾಗಿದೆ.
ಮುಂಜಾನೆ 4 ರಿಂದ 5 ಗಂಟೆಯ ಸುಮಾರಿಗೆ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿದ್ದು, ಈ ಗುಜರಿ ಅಂಗಡಿಯಲ್ಲಿದ್ದ ಬ್ಯಾಟರಿಯಿಂದ ಈ ಬೆಂಕಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.