ಮಂಗಳೂರು: ಎಚ್. ಅಬೂಬಕರ್ ಹಾಜಿ ನಿಧನ
ಮಂಗಳೂರು, ಆ.2: ನಗರದ ಬಂದರ್ನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಮಾಜಿ ಟ್ರಸ್ಟಿ, ಬಂದರ್ ನಿವಾಸಿ ಎಚ್.ಅಬೂಬಕರ್ ಹಾಜಿ (75) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು.
ಅಬೂಬಕರ್ ಅವರು ಝೀನತ್ ಭಕ್ಷ್ ಯತೀಂಖಾನ್ ಹಾಲ್ನ ಸ್ಥಾಪಕ ಸದಸ್ಯರಾಗಿದ್ದರು. ಅಲ್ಲದೆ, ಪ್ರಸ್ತುತ ಯತೀಂಖಾನ್ ಹಾಲ್ನ ಸಮಿತಿಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜತೆಗೆ, ನಗರದಲ್ಲಿ ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಬಂದರ್ನ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ರವಿವಾರ ಮಧ್ಯಾಹ್ನ ನೆರವೇರಿತು.
Next Story