ಬ್ರಹ್ಮಾವರ: ವಿದೇಶದಿಂದ ಬಂದವರಿಗೆ ಪಾಸಿಟಿವ್
ಬ್ರಹ್ಮಾವರ, ಆ.5: ಬ್ರಹ್ಮಾವರ ತಾಲೂಕಿನಲ್ಲಿ ಇಂದು ಮೂವರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಇವರಲ್ಲಿ ಇತ್ತೀಚೆಗೆ ವಿದೇಶದಿಂದ ಆಗಮಿಸಿದ ಉಪ್ಪೂರು ಮಾಯಾಡಿಯ 55ರ ಹರೆಯದ ಪುರುಷರೂ ಸೇರಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ.
ಉಳಿದಂತೆ 38 ಕಳ್ತೂರು ಅರ್ಬೆಟ್ಟು ಎಂಬಲ್ಲಿ 54 ವರ್ಷ ಪ್ರಾಯದವರಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿ ಎರಡು ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಇನ್ನೊಬ್ಬರು ವಾರಂಬಳ್ಳಿ ಗ್ರಾಮದ ಇಂದಿರಾನಗರದ 40 ವರ್ಷ ಪ್ರಾಯದ ಮಹಿಳೆ. ಇವರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಿ ಆಸುಪಾಸಿನ ಮೂರು ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.
ಬೈಂದೂರು ತಾಲೂಕಿನಲ್ಲಿ ಒಟ್ಟು 10 ಮಂದಿಯಲ್ಲಿ ಇಂದು ಪಾಸಿಟಿವ್ ಪತ್ತೆಯಾಗಿದೆ. ನಾಡದ ನಾಲ್ವರು, ಬೈಂದೂರಿನ ಇಬ್ಬರು, ಕೆರ್ಗಾಲಿನ ಒಬ್ಬರು, ಕಾಲ್ತೋಡು ಇಬ್ಬರು ಹಾಗೂ ಉಪ್ಪುಂದದ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ.
Next Story