ಮರೀಲ್ ಮೂಸಾ ಹಾಜಿ ನಿಧನ
ಉಪ್ಪಿನಂಗಡಿ: ಇಲ್ಲಿನ ಪ್ರತಿಷ್ಠಿತ ಮುಖ್ರಿ ಫ್ಯಾಮಿಲಿಯ ಹಿರಿಯ ವ್ಯಕ್ತಿ, ಮರೀಲ್ ಮೂಸಾ ಹಾಜಿ (96) ಆ. 9ರಂದು ಪುರುಷರಕಟ್ಟೆಯಲ್ಲಿರುವ ತನ್ನ ಪುತ್ರನ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಮುಕ್ವೆ ರಹಿಮಾನಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಸುಮಾರು 35 ವರ್ಷಗಳ ಕಾಲ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದ ಇವರು ಪಂಚಾಯಿತಿಕೆದಾರರಾಗಿ ನೂರಾರು ಕುಟುಂಬ ಸಂಬಂಧಗಳನ್ನು ಜೋಡಿಸುವಲ್ಲಿ ಮತ್ತು ಇತರೇ ಸಮಸ್ಯೆ ಸಂಬಂಧಗಳನ್ನು ಬಗೆಹರಿಸಿ ಸಾಮಾಜಿಕ ನ್ಯಾಯ ಕೊಡುವ ವ್ಯಕ್ತಿ ಎಂಬ ಖ್ಯಾತಿಯೊಂದಿಗೆ ಚಿರಪರಿಚಿತರಾಗಿದ್ದರು.
ಮೃತರು ಪತ್ರರು, ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story