ಎಸೆಸೆಲ್ಸಿ : ಕಣ್ಣೂರು ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ
ಆಯಿಶತ್ ಶಹನಾಝ್ ಗೆ 596 ಅಂಕ
ಶಹನಾಝ್ - ಸನ
ಮಂಗಳೂರು : ಕಣ್ಣೂರು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಕಣ್ಣೂರು ಆಂಗ್ಲಮಾಧ್ಯಮ ಪ್ರೌಢ ಶಾಲೆಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಬಂದಿರುತ್ತದೆ.
ಒಟ್ಟು ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 5 ಮಂದಿ ವಿಶಿಷ್ಟ ಶ್ರೇಣಿ ಮತ್ತು 15 ಪ್ರಥಮ ಶ್ರೇಣಿ ಪಡೆದಿರುತ್ತಾರೆ ಹಾಗೂ ಉಳಿದ 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಹತ್ತನೇ ತರಗತಿ ವಿದ್ಯಾರ್ಥಿನಿ ಆಯಿಶತ್ ಶಹನಾಝ್ 596 (95.36%) ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈಕೆ ಕಣ್ಣೂರು ನಿವಾಸಿ ಅಬ್ದುಲ್ ಸಲಾಂ ಮತ್ತು ಅವ್ವಮ್ಮಾ ದಂಪತಿಯ ಪುತ್ರಿ. ಫಾತಿಮಾ ಸನ 569 (91.04) ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಸಂಸ್ಥೆಯಲ್ಲಿ ಆಲಿಮ್ ವಿಧ್ಯಾಬ್ಯಾಸದೊಂದಿಗೆ ಪಿಯುಸಿ ವಿಭಾಗವಿದ್ದು, ಎಸೆಸೆಲ್ಸಿ ಯಲ್ಲಿ 85% ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿನಿ ಯರಿಗೆ ಶುಲ್ಕದಲ್ಲಿ 25% ರಿಯಾಯಿತಿ ನೀಡಲಾಗುವುದು. ಆದುದರಿಂದ ಅರ್ಹ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಿಯುಸಿಗೆ ಪ್ರವೇಶ ಪಡೆಯುವಂತೆ ಸಂಸ್ಥೆಯ ಸಂಚಾಲಕರಾದ ರಿಯಾಝ್ ಅಹ್ಮದ್ ಕಣ್ಣೂರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.