ಎಸೆಸೆಲ್ಸಿ ಫಲಿತಾಂಶ : ಗಿನ್ನೆಸ್ ದಾಖಲೆಯ ತುಳಸಿಗೆ 622 ಅಂಕ
ಉಡುಪಿ, ಆ.12: ಅತಿ ಹೆಚ್ಚು ಖಡ್ಗ ಧರಿತ ನೃತ್ಯಗಾರರು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನೆಸ್ ದಾಖಲೆ ಸ್ಥಾಪಿಸಿರುವ ಬೆಂಗಳೂರಿನ ಶ್ರೀಕುಮಾರನ್ ಚಿಲ್ಡ್ರನ್ ಸ್ಕೂಲ್ನ ವಿದ್ಯಾರ್ಥಿನಿ ತುಳಸಿ ಜಿ.ರಾಯಸ ಇವರು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 622 (ಶೇ.99.52) ಅಂಕ ಪಡೆದು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಮೂಲತ ಉಡುಪಿಯ ಕೊಡವೂರಿನ ರಾಯಸ ಕುಟುಂಬದ ಗುರುಪ್ರಕಾಶ್ ರಾಯಸ ಮತ್ತು ಸರಿತ ಗುರುಪ್ರಕಾಶ್ ಇವರ ಪುತ್ರಿಯಾದ ತುಳಸಿ ಜಿ. ರಾಯಸ ತೆಂಕು ತಿಟ್ಟಿನ ಚಂಡೆಯನ್ನು ಕೂಡ ಸುಲಲಿತವಾಗಿ ನುಡಿಸುತ್ತಾಳೆ.
ಸಂಸ್ಕೃತ, ಕನ್ನಡ, ಗಣಿತ ಹಾಗೂ ಸಮಾಜ ವಿಜ್ಞಾನದಲ್ಲಿ ಪೂರ್ಣ ಅಂಕಗಳನ್ನು ಪಡೆದಿರುವ ಈಕೆ, ಇಂಗ್ಲೀಷ್ನಲ್ಲಿ 99 ಹಾಗೂ ವಿಜ್ಞಾನದಲ್ಲಿ 98 ಅಂಕ ಪಡೆದಿದ್ದಾಳೆ.
Next Story