ತಂದೆ ಮತ್ತು ತಾಯಿಗೂ ವಿಷಾಹಾರ ನೀಡಿ ಕೊಲೆಗೆ ಯತ್ನಿಸಿದ ಪುತ್ರ

ಕಾಸರಗೋಡು: ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿ ತಂಗಿಯನ್ನು ಕೊಂದ ಆರೋಪಿ ಅಣ್ಣ

ಅಲ್ಬಿನ್

ಕಾಸರಗೋಡು : ಸಹೋದರಿಯನ್ನು ಸಹೋದರನೇ ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿ ಕೊಲೆಗೈದ ಘಟನೆ ವೆಳ್ಳರಿಕುಂಡು ಠಾಣೆ ವ್ಯಾಪ್ತಿಯ ಬಳಾಲ್ ನಲ್ಲಿ ಬೆಳಕಿಗೆ ಬಂದಿದೆ.  ಸಹೋದರಿ ಅಲ್ಲದೆ ತಂದೆ ಮತ್ತು ತಾಯಿಯನ್ನು ಈತ ಕೊಲೆಗೆ ಯತ್ನಿಸಿದ್ದು, ಈ ಪೈಕಿ ತಂದೆಯ ಸ್ಥಿತಿ ಗಂಭೀರವಾಗಿದೆ.

ಬಳಾಲ್  ಅರಿಂಗಲ್ ನ ಬೆನ್ನಿ ಅವರ ಪುತ್ರಿ ಆನ್ ಮೇರಿ (16) ಮೃತಪಟ್ಟವರು. ಕೃತ್ಯಕ್ಕೆ ಸಂಬಂಧಪಟ್ಟಂತೆ ಸಹೋದರ ಅಲ್ಬಿನ್ ಬೆನ್ನಿ ( 22) ಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ಬೆನ್ನಿ  ಜಿಲ್ಲಾಸ್ಪತ್ರೆ ಹಾಗೂ ತಾಯಿ ಬೆಸ್ಸಿ ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ವಾರಗಳ ಹಿಂದೆ ಘಟನೆ ನಡೆದಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮೇರಿ ಆ. 5ರಂದು ಮೃತಪಟ್ಟಿದ್ದಾರೆ.

ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್ ನ್ನು ಸಹೋದರಿ ಹಾಗೂ ತಂದೆ- ತಾಯಿ  ಸೇವಿಸಿದ್ದರು. ಐಸ್ ಕ್ರೀಮ್ ಸೇವಿಸಿದ ಬಳಿಕ ವಾಂತಿ ಬೇಧಿ ಸೇರಿದಂತೆ ಅಸ್ವಸ್ಥತೆ ಉಂಟಾಗಿತ್ತು. ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ನಂಬಿ ಮೂವರು ಮನೆ ಮದ್ದನ್ನು ಸೇವಿಸಿದ್ದರು. ಎರಡು ದಿನಗಳ ಬಳಿಕ ಆನ್ ಮೇರಿ ಅಸ್ವಸ್ಥಗೊಂಡಿದ್ದು, ಇದರಿಂದ ಚೆರುಪ್ಪುಯದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ನಡುವೆ ಆನ್ ಮೇರಿಗೆ ಹಳದಿ ಕಾಮಾಲೆ ಕಂಡುಬಂದಿತ್ತು. ಸ್ಥಿತಿ ಗಂಭೀರಗೊಂಡು ನಂತರ ಮೃತಪಟ್ಟರು. ಇದಲ್ಲದೆ  ಬೆನ್ನಿ ಅವರ ಸ್ಥಿತಿಯೂ ಗಂಭೀರವಾಗಿದ್ದು, ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ಆರಂಭದಲ್ಲಿ ನಂಬಲಾಗಿತ್ತು. ಆದರೆ ಅನ್ನಾ ಮೇರಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಿಂದ ಅನ್ನಾ ಮೇರಿ ವಿಷ ಸೇವನೆಯಿಂದ ಮೃತಪಟ್ಟಿರುವುದಾಗಿ ಖಚಿತಗೊಂಡಿತ್ತು. ಈ  ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆಲ್ಬಿನ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಕುಟುಂಬದ ನಾಲ್ವರ ಪೈಕಿ ಮೂವರ ದೇಹದೊಳಗೆ ವಿಷ ಪದಾರ್ಥ ಪತ್ತೆಯಾಗಿದ್ದರೂ ಆಲ್ಬಿನ್ ನಲ್ಲಿ ಪತ್ತೆಯಾಗಿರ ಲಿಲ್ಲ. ಇದರಿಂದ ಆಲ್ಬಿನ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಐಸ್ ಕ್ರೀಮ್ ನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಪ್ರೇಮ ಹಾಗೂ ಅಕ್ರಮ ವ್ಯವಹಾರಕ್ಕೆ ಮನೆಯವರು ಅಡ್ಡಿ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಈತ ಮನೆಯವರನ್ನು ಕೊಲೆಗೈಯ್ಯಲು ತೀರ್ಮಾನಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. ಅನ್ಯ ಜಾತಿಯ ಯುವತಿಯನ್ನು ಈತ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಮನೆಯವರು ಅಡ್ಡಿಪಡಿಸಿದ್ದು, ಇದರಿಂದ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಕೊಲೆಗೆ ಯತ್ನಿಸಿದ್ದ

 ಆಲ್ಬಿನ್ ಈ ಹಿಂದೆಯೂ ಮನೆಯವರನ್ನು ಕೊಲೆಗೈಯ್ಯಲು ಯತ್ನಿಸಿದ್ದನು. ಆದರೆ ಇದು ವಿಫಲಗೊಂಡಿತ್ತು.  ಕೋಳಿ ಪದಾರ್ಥದಲ್ಲಿ ವಿಷ ಬೆರೆಸಿದ್ದನು. ಆದರೆ ವಿಷದ  ಅಂಶ ಕಡಿಮೆಯಾದುದರಿಂದ ಇದು ವಿಫಲಗೊಂಡಿತ್ತು. ಬಳಿಕ ಈತ ವೆಬ್ ಸೈಟ್ ಗಳಿಂದ ಮಾಹಿತಿ ಕಲೆ ಹಾಕಿ ಐಸ್ ಕ್ರೀಮ್ ನಲ್ಲಿ ಇಲಿ ವಿಷ ಬೆರೆಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರಿಯ ಅಂತ್ಯಕ್ರಿಯೆ ಹಾಗೂ ಬಳಿಕದ ಕಾರ್ಯಕ್ರಮದಲ್ಲೂ ಈತ  ಭಾಗಿಯಾಗಿದ್ದನು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯನ್ನು ಭೇಟಿಯಾಗಿದ್ದನು. ಪೊಲೀಸರಿಗೆ, ಸಂಬಂಧಿಕರಿಗೆ ಸಂಶಯ ಬಾರದಂತೆ ಈತ ವರ್ತಿಸಿದ್ದನು. ಕುಟುಂಬದ ಎಲ್ಲರನ್ನೂ ಕೊಲೆಗೈಯ್ಯಲು ಈತ ಷಡ್ಯಂತ್ರ ರೂಪಿಸಿದ್ದು, ತನ್ನ ರಹಸ್ಯ ಚಟುವಟಿಕೆಗೆ ಮನೆಯವರು ಅಡ್ಡಿಯಾಗುತ್ತಿರುವುದು ಮಾತ್ರವಲ್ಲ , ಎಲ್ಲಾ ಆಸ್ತಿಯನ್ನು ಪಡೆಯಲು ಈ ಯೋಜನೆ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಮೂವರ ಹೊರತು ಆಲ್ಬಿನ್ ಗೆ ಯಾವುದೇ ಆರೋಗ್ಯ ಸಮಸ್ಯೆ ತಲೆದೋರದೆ ಇದ್ದದು ಸಂಶಯಕ್ಕೆ ಕಾರಣವಾಯಿತು . ವೈದ್ಯ ರು ನೀಡಿದ ವರದಿ  ಪೊಲೀಸರ ತನಿಖೆಗೂ ನೆರವಾಯಿತು . ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ತನಿಖೆ ನಡೆಸಿದ ಪೊಲೀಸರಿಗೆ ಕೃತ್ಯವನ್ನು    ಬೆಳಕಿಗೆ ತರಲು ಸಹಕಾರಿಯಾಯಿತು ಎಂದು ಅವರು ತಿಳಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top