ಪುತ್ತೂರು, ಕಡಬ ತಾಲೂಕಿನಲ್ಲಿ ಮತ್ತೆ 7 ಕೊರೋನ ಪಾಸಿಟಿವ್ ದೃಢ
ಪುತ್ತೂರು, ಆ.25: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಮಂಗಳವಾರ 7 ಕೊರೋನ ಪ್ರಕರಣಗಳು ದೃಢಪಟ್ಟಿವೆ.
ಪುತ್ತೂರು ತಾಲೂಕಿನ ಕೆಮ್ಮಿಂಜೆ ನಿವಾಸಿ 55 ವರ್ಷದ ಪುರುಷ, ಕೆಯ್ಯೂರು ನಿವಾಸಿ 59 ವರ್ಷದ ಪುರುಷ, ಬನ್ನೂರು ಕಟ್ಟೆ ನಿವಾಸಿ 76 ವರ್ಷದ ಪುರುಷ, ಮಾಡ್ನೂರು ನಿವಾಸಿ 62 ವರ್ಷದ ಪುರುಷ, ವೀರಮಂಗಲ ನಿವಾಸಿ 38 ವರ್ಷದ ಮಹಿಳೆ ಹಾಗೂ ಕಡಬ ತಾಲೂಕಿನ ಕುಂತೂರು ನಿವಾಸಿ 71 ವರ್ಷದ ಪುರುಷ, ನೆಲ್ಯಾಡಿ ನಿವಾಸಿ 74 ವರ್ಷದ ಪುರುಷನಲ್ಲಿ ಕೊರೋನಾ ದೃಢಪಟ್ಟಿದೆ.
ಇದರೊಂದಿಗೆ ಈ ತನಕ ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಒಟ್ಟು 574 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
Next Story