ಮುಲ್ಕಿ: ಮಾರುಕಟ್ಟೆ ರಸ್ತೆಯ ಮೆಡಿಕಲ್ ನಿಂದ ಕಳ್ಳತನ
ಮುಲ್ಕಿ, ಸೆ.7: ಇಲ್ಲಿನ ಬಸ್ ನಿಲ್ದಾಣದ ಮಾರುಕಟ್ಟೆ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮೆಡಿಕಲ್ ವೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಕಳವುಗೈದಿರುವುದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಸುರೇಶ್ ಶೆಟ್ಟಿ ಶಿಮಂತೂರು ಎಂಬವರ ಮಾಲಕತ್ವದ ಶ್ರೀ ದುರ್ಗಾ ಮೆಡಿಕಲ್ಸ್ಗೆ ಕಳೆದ ರಾತ್ರಿ ಶೆಟರ್ ಮುರಿದು ಒಳನುಗ್ಗಿರುವ ಕಳ್ಳರು ಕ್ಯಾಶ್ ಕೌಂಟರ್ನಲ್ಲಿದ್ದ 33 ಸಾವಿರ ರೂ. ಕಳವುಗೈದಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸೋಮವಾರ ಔಷಧಗಳ ಡೀಲರ್ ಗೆ ನೀಡುವ ಉದ್ದೇಶದಿಂದ ಈ ಹಣವನ್ನು ಮೀಸಲಿಟ್ಟಿದ್ದೆ ಎಂದು ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಮುಲ್ಕಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
Next Story