ಮಂಗಳೂರು: ಫ್ಲೆಕ್ಸ್, ಕಟೌಟ್ ತೆರವಿಗೆ ಮೇಯರ್ ಸೂಚನೆ
ಮಂಗಳೂರು, ಸೆ.17: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಕಲಾಗಿರುವ ವಿವಿಧ ಖಾಸಗಿ ಮತ್ತು ಸಾರ್ವಜನಿಕ ಸಂಬಂಧಿತ ಕಟೌಟ್ , ಫ್ಲೆಕ್ಸ್ ಗಳನ್ನು ತುರ್ತಾಗಿ ತೆರವುಗೊಳಿಸುವಂತೆ ಮೇಯರ್ ದಿವಾಕರ್ ಸೂಚಿಸಿದ್ದಾರೆ.
ಇದಕ್ಕೆ ತಪ್ಪಿದಲ್ಲಿ ಮಹಾನಗರ ಪಾಲಿಕೆಯ ವತಿಯಿಂದಲೇ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಲಾಗುವುದು ಹಾಗೂ ಪಾಲಿಕೆಯಿಂದ ವಶಪಡಿಸಲಾಗಿರುವ ಪ್ಲೆಕ್ಸ್ ಮತ್ತು ಅದರ ಫ್ರೇಮ್ ಗಳನ್ನು ಹಿಂದಿರುಗಿಸಲಾಗುವುದಿಲ್ಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story