ಐಟಿಐ ಮ್ಯಾನೇಜ್ಮೆಂಟ್ ಖೋಟಾದಡಿ ಅರ್ಜಿ ಆಹ್ವಾನ
ಮಂಗಳೂರು, ಸೆ.19: ನಗರದ ಕದ್ರಿಯಲ್ಲಿರುವ ಸರಕಾರಿ ಮಹಿಳಾ ಐಟಿಐಯಲ್ಲಿ ಕೇಂದ್ರ ಸರಕಾರದ ಪಿಪಿಪಿ ತರಬೇತಿ ಯೋಜನೆಯಡಿ ಅನುಷ್ಠಾನಗೊಂಡು ಎನ್ಸಿವಿಟಿ ಸಂಯೋಜನೆ ಪಡೆದ ವೃತ್ತಿಗಳ ಮ್ಯಾನೇಜ್ಮೆಂಟ್ ಸೀಟ್ಗಳಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದು.
ಕಂಪ್ಯೂಟರ್ ಅಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ತರಬೇತಿ ಅವಧಿ -1 ವರ್ಷ, ವಿದ್ಯಾರ್ಹತೆ-ಎಸೆಸೆಲ್ಸಿ, ಮ್ಯಾನೇಜ್ಮೆಂಟ್ ಸೀಟ್- 8. ಇಲೆಕ್ಟ್ರಾನಿಕ್ ಮೆಕ್ಯಾನಿಕ್, ತರಬೇತಿ ಅವಧಿ - 2 ವರ್ಷ, ವಿದ್ಯಾರ್ಹತೆ - ಎಸೆಸೆಲ್ಸಿ, ಮ್ಯಾನೇಜ್ಮೆಂಟ್ ಸೀಟ್-8.
ಇಲೆಕ್ಟ್ರಿಯನ್, ತರಬೇತಿ ಅವಧಿ - 2 ವರ್ಷ, ವಿದ್ಯಾರ್ಹತೆ - ಎಸೆಸೆಲ್ಸಿ, ಮ್ಯಾನೇಜ್ಮೆಂಟ್ ಸೀಟ್ - 20, ಎಂಆರ್ಎಸಿ, ತರಬೇತಿ ಅವಧಿ - 2 ವರ್ಷ, ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ, ಮ್ಯಾನೇಜ್ಮೆಂಟ್ ಸೀಟ್- 24.
ಮಾಹಿತಿಗೆ ದೂ.ಸಂ: 0824-2216360, 9845226485ನ್ನು ಸಂಪರ್ಕಿಸಬಹುದು ಎಂದು ಪ್ರಾಚಾರ್ಯರ ಪ್ರಕಟನೆ ತಿಳಿಸಿದೆ.