ವಿಟ್ಲ : ಅಕ್ರಮ ರಕ್ತ ಚಂದನ ಸಾಗಾಟ ; ಆರೋಪಿ ಸೆರೆ
ವಿಟ್ಲ : ಅಕ್ರಮವಾಗಿ ರಕ್ತ ಚಂದನದ ತುಂಡು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವಿಟ್ಲ ಕಸಬ ಎಂಬಲ್ಲಿ ಓರ್ವನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತನನ್ನು ಪುತ್ತೂರು ಸವಣೂರು ಗ್ರಾಮದ ನಿವಾಸಿ ಅಬ್ಬು ಚಾಪಳ್ಳ ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ ಸುಮಾರು 24 ಸಾವಿರ ರೂ. ಮೌಲ್ಯದ ರಕ್ತ ಚಂದನದ ತುಂಡನ್ನು ವಶಕ್ಕೆ ಪಡೆಯಲಾಗಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story