ಸುಳ್ಯ : ಬಾಲಕಿಗೆ ಕಿರುಕುಳ ಪ್ರಕರಣ ; ಆರೋಪಿ ಶ್ಯಾಮ್ ಬಂಧನ
ಸುಳ್ಯ : ಸ್ನಾನ ಮಾಡುತ್ತಿದ್ದ ಬಾಲಕಿಯ ವೀಡಿಯೊ ರೆಕಾರ್ಡ್ ಮಾಡಿದ ಆರೋಪದಲ್ಲಿ ಯುವಕನೋರ್ವನನ್ನು ಬೆಳ್ಳಾರೆ ಪೊಲೀಸರು ಬಂಧಿಸಿ, ಪೋಕ್ಸೊ ಪ್ರಕರಣ ದಾಖಲಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಕಲ್ಮಡ್ಕ ನಿವಾಸಿ ಶ್ಯಾಮ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪುತ್ರಿಗೆ ಕಿರುಕುಳ ನೀಡಿರುವ ಬಗ್ಗೆ ಆಕೆಯ ತಂದೆ ಆರೋಪಿ ಶ್ಯಾಮ್ ನಲ್ಲಿ ವಿಚಾರಿಸಿದ ಸಂದರ್ಭ ಶ್ಯಾಮ್ ಬಾಲಕಿಗೆ ತಂದೆಗೂ ಹಲ್ಲೆಗೆ ಯತ್ನಿಸಿದ್ದಾಗಿ ದೂರಲಾಗಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಶ್ಯಾಮ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story