ಅ.2ರಂದು ಉಚಿತ ಕೊರೋನ ಪರಿಶೀಲನಾ ಶಿಬಿರ
ಮಂಗಳೂರು, ಅ.1: ದ.ಕ. ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮತ್ತು ಕೆನರಾ ಬಸ್ಸು ಮಾಲಕರ ಸಂಘದ ಸಹಯೋಗದಲ್ಲಿ ಉಚಿತ ಕೊರೋನ ಪರಿಶೀಲನಾ ಶಿಬಿರವನ್ನು ಅ.2ರಂದು ಆಯೋಜಿಸಲಾಗಿದೆ.
ಬೆಳಗ್ಗೆ 10ರಿಂದ 1 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ಬಸ್ಸು ಚಾಲಕ, ನಿರ್ವಾಹಕರು, ಆಟೋರಿಕ್ಷಾ ಚಾಲಕರು, ಸಾರ್ವಜನಿಕರು ಭಾಗವಹಿಸಬಹುದು ಎಂದು ಸಾರಿಗೆ ಇಲಾಖೆಯ ಅಧಿಕಾರಿ ಆರ್.ಎಂ. ವರ್ಣೇಕರ್ ತಿಳಿಸಿದ್ದಾರೆ.
Next Story