ಸ್ಕೂಟರಿನಿಂದ ಬಿದ್ದು ಸಹಸವಾರ ಮೃತ್ಯು
ಗಂಗೊಳ್ಳಿ, ಅ.1: ಸ್ಕೂಟರಿನಲ್ಲಿ ಹೋಗುತ್ತಿದ್ದ ಸಹಸವಾರರೊಬ್ಬರು ರಸ್ತೆ ಬಿದ್ದು ಮೃತಪಟ್ಟ ಘಟನೆ ತ್ರಾಸಿ ಜಂಕ್ಷನ್ ಸಮೀಪ ಸೆ.30ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಜೆನೆಟ್ ಕ್ರಾಸ್ತಾ(52) ಎಂದು ಗುರುತಿಸಲಾಗಿದೆ. ಇವರು ರೋಹನ್ ಫೆರ್ನಾಂಡೀಸ್ ಎಂಬವರ ಸ್ಕೂಟರಿನಲ್ಲಿ ಹಿಂಬದಿಯಲ್ಲಿ ಕುಳಿತು ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದಾಗ ಜೆನೆಟ್ ಕ್ರಾಸ್ತಾ ಆಯ ತಪ್ಪಿ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಇವರು, ಚಿಕಿತ್ಸೆ ಫಲಕಾರಿಯಾಗದೆ ಅ.1ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story