ಅ.2: ಮಹಾನ್ ತಾತ ಸಾಕ್ಷ್ಯಚಿತ್ರ ಪ್ರದರ್ಶನ
ಮಂಗಳೂರು, ಅ.1: ನಾಡಿನ ಸಾಕ್ಷಿಪ್ರಜ್ಞೆ, ಸ್ವಾತಂತ್ರ್ಯ ಸೇನಾನಿ, ಜನಪರ ಹೋರಾಟಗಾರ 103 ವರ್ಷದ ಪ್ರಾಯದ ಎಚ್.ಎಸ್. ದೊರೆ ಸ್ವಾಮಿಯವರ ಬದುಕು ಮತ್ತು ಸಂಘರ್ಷದ ಕುರಿತಾದ ‘ಪೆಡಸ್ಟೆರಿಯನ್ ಪಿಚ್ಚರ್ಸ್’ನ ಮಿತ್ರ ದೀಪು ನಿರ್ಮಾಣದ ಸಾಕ್ಷ್ಯಚಿತ್ರ ‘ಮಹಾನ್ ತಾತ’ ಅ.2ರಂದು ರಾಜ್ಯದ ಹಲವೆಡೆ ಪ್ರದರ್ಶನಗೊಳ್ಳಲಿದೆ.
ಅದರಂತೆ ಮಂಗಳೂರಿನ ದ.ಕ.ಜಿಲ್ಲಾ ಸಹಮತ ವೇದಿಕೆಯ ಆಶ್ರಯದಲ್ಲಿ ಸಂಜೆ 4ಕ್ಕೆ ನಗರದ ಸ್ಟೇಟ್ಬ್ಯಾಂಕ್ ಬಳಿಯ ಅಲ್ ರಹಬಾ ಪ್ಲಾಝಾದ 2ನೇ ಮಹಡಿಯಲ್ಲಿರುವ ದಿ ಕ್ಯಾಪಸ್ ಕರಿಯರ್ ಅಕಾಡಮಿಯ ಸಭಾಂಗಣದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ ಎಂದು ಸಹಮತ ವೇದಿಕೆಯ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ತಿಳಿಸಿದ್ದಾರೆ.
Next Story