ಆ.5ರಂದು ದುಬೈ ವಿಮಾನ ಯಾನ ರದ್ದು
ಮಂಗಳೂರು, ಆ. 4: ದುಬೈ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ತೊಂದರೆಯಿಂದಾಗಿ ಆಗಸ್ಟ್ 4 ಮತ್ತು 5ರಂದು ಎರಡು ದಿನಗಳ ದುಬೈ ಮತ್ತು ಮಂಗಳೂರು ನಡುವಿನ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ಆದರೆ, ಶನಿವಾರ ವಿಮಾನ ಪ್ರಯಾಣ ಆರಂಭಗೊಳ್ಳುವ ನಿರೀಕ್ಷೆ ಇದ್ದರೂ ಶುಕ್ರವಾರ ಸಂಜೆ ಈ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ.
Next Story