ಜೋಕಟ್ಟೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರೋತ್ಸವ ಆಚರಣೆ
ಮಂಗಳೂರು, ಆ.16: ಜೋಕಟ್ಟೆ ಫ್ರೆಂಡ್ಸ್ ಕ್ಲಬ್ ವತಿಯಿಂದ 70ನೆ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಸೌದಿ ಅರೆಬಿಯದ ಅಲ್ ಮುಝೈನ್ ಕಂಪೆನಿಯ ಮುಖ್ಯಸ್ಥ ಹಾಜಿ ಝಕರಿಯಾ ಜೋಕಟ್ಟೆ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಜೆಎಫ್ಸಿಯ ನವೀಕೃತ ಕಚೇರಿಯನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಇಬ್ಬರು ಬಡ ಹೆಣ್ಣುಮಕ್ಕಳಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ‘ಸ್ಟಾರ್ ಅಫ್ ಬ್ಯಾರಿ‘ ಪ್ರಶಸ್ತಿ ಪಡೆದ ಅಲ್ ಮುಝೈನ್ ಸಂಸ್ಥೆಯ ಝಕರಿಯಾರನ್ನು ಸನ್ಮಾನಿಸಲಾಯಿತು. ಊರಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಂಚಾಯತ್ ಸದಸ್ಯ ಎ.ಕೆ. ಅಶ್ರಫ್ ಸ್ವಾತಂತ್ರ್ಯದ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಚೆಯೋನು ಅಬ್ದುರ್ರಹ್ಮಾನ್, ಫಾರೂಕ್ ಸಫ ಮರ್ವಾ, ಟಿ.ಎ. ಆಲಿಯಬ್ಬ, ಉಞಿ ಉಸ್ತಾದ್, ಬಿ.ಶೇಕುಂಞಿ ಮತ್ತಿತರರು ಉಪಸ್ಥಿತರಿದ್ದರು. ಉಞಿ ಉಸ್ತಾದ್ ದುಆಶೀರ್ವಚನಗೈದರು. ಕ್ಲಬ್ನ ಅಧ್ಯಕ್ಷ ಶಿಹಾಬ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು. ಹಬೀಬ್ ಈದ್ಗಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಆಝಾದಿ ಬೈಕ್ ರ್ಯಾಲಿ ಜೋಕಟ್ಟೆಯಿಂದ ಟಿಪ್ಪು ಮೈದಾನದವರೆಗೆ ನಡೆಯಿತು. ಟಿಪ್ಪು ಮೈದಾನದಲ್ಲಿ ‘ಆಝಾದಿ ಖೇಲ್‘ ಕ್ರೀಡಾಕೂಟವನ್ನೂ ಆಯೋಜಿಸಲಾಗಿತ್ತು.