ಹಾಜಿಗಳ ಎರಡನೆ ತಂಡ ಆಗಮನ
ಮಂಗಳೂರು, ಸೆ.17: ಕೇಂದ್ರ ಹಜ್ ಸಮಿತಿ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡವರ ಪೈಕಿ 152 ಮಂದಿ ಹಾಜಿಗಳ ಎರಡನೆ ತಂಡ ಮಂಗಳೂರಿಗೆ ಆಗಮಿಸಿದೆ.
ಇಂದು ಪೂರ್ವಾಹ್ನ 11:05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿದ್ದ ಏರ್ ಇಂಡಿಯಾವು ವಿಳಂಬವಾಗಿ ಮಧ್ಯಾಹ್ನ 1:45 ಸುಮಾರಿಗೆ ತಲುಪಿದೆ. ಹಜ್ ಸಮಿತಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 608 ಮಂದಿ ಹಜ್ ಯಾತ್ರೆ ಕೈಗೊಂಡಿದ್ದರು. ಈ ಪೈಕಿ ರವಿವಾರ 151 ಮಂದಿ ಹಾಗೂ ಸೋಮವಾರ 152 ಮಂದಿ ಹಾಜಿಗಳ ಸಹಿತ ಒಟ್ಟು 303 ಮಂದಿ ಮರಳಿದ್ದಾರೆ.
ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ರಾಜ್ಯ ಹಜ್ ಸಮಿತಿಯ ಅಧಿಕಾರಿ ಫೈರೋಝ್ ಪಾಶಾ, ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಿ. ಮಹ್ಮೂದ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ, ವಕ್ಫ್ ಅಧಿಕಾರಿ ಅಬೂಬಕರ್ ಉಪಸ್ಥಿತರಿದ್ದರು.
ಸೆಪ್ಟಂಬರ್ 20ರಂದು ಮಧ್ಯಾಹ್ನ 12:05ಕ್ಕೆ ಹಾಜಿಗಳ ಮೂರನೆ ತಂಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
Next Story