ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ: ಜ್ಯೂಸ್ ಸೆಂಟರ್ಗೆ ಹಾನಿ
ಕೊಣಾಜೆ, ಸೆ.28: ಗ್ಯಾಸ್ ಸಿಲಿಂಡರ್ ಸೋರಿಕೆ ಉಂಟಾದ್ದರಿಂದ ಕಾಣಿಸಿಕೊಂಡ ಬೆಂಕಿಯಿಂದ ಜ್ಯೂಸ್ ಸೆಂಟರ್ವೊಂದಕ್ಕೆ ಹಾನಿ ಸಂಭವಿಸಿದ ಘಟನೆ ದೇರಳಕಟ್ಟೆಯಲ್ಲಿಂದು ನಡೆದಿದೆ.
ಇಲ್ಲಿನ ಗ್ಯಾಲಕ್ಸಿ ಜ್ಯೂಸ್ ಸೆಂಟರ್ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.
ಜ್ಯೂಸ್ ಸೆಂಟರ್ನಲ್ಲಿ ಅಡುಗೆ ಅನಿಲ ಸಿಲಿಂಡರ್ನಲ್ಲಿ ಸೋರಿಕೆ ಉಂಟಾಗಿತ್ತು. ಇದರಿಂದ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಂಗಡಿಯ ನೌಕರರು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳವನ್ನು ಕರೆಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿಯಿಂದ ಜ್ಯೂಸ್ ಸೆಂಟರ್ಗೆ ಭಾಗಶಃ ಹಾನಿಯಾಗಿದೆ.
Next Story