ಪಡುಪಣಂಬೂರು: ಸ್ಕೂಟರ್ಗೆ ಕಾರು ಢಿಕ್ಕಿ; ಇಬ್ಬರು ಮಹಿಳೆಯರು ಗಂಭೀರ
ಮುಲ್ಕಿ, ಅ.12: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಶನೀಶ್ವರ ದೇವಸ್ಥಾನದ ಎದುರು ಕಾರು ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ನಲ್ಲಿದ್ದ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಗಾಯಗೊಂಡವರನ್ನು ಪಡುಪಣಂಬೂರು ಕಲ್ಲಾಪು ನಿವಾಸಿಗಳಾದ ಶಾಲಿನಿ ಮತ್ತು ರೇಣುಕಾ ಎಂದು ಗುರುತಿಸಲಾಗಿದೆ. ಪಡುಪಣಂಬೂರಿನ ಕಲ್ಲಾಪು ನಿವಾಸಿಗಳಾದ ಶಾಲಿನಿ ಮತ್ತು ರೇಣುಕಾ ರಾಷ್ಟ್ರೀಯ ಹೆದ್ದಾರಿಯಿಂದ ಕಲ್ಲಾಪು ತೋಕೂರು ಕಡೆಗೆ ಸ್ಕೂಟರನ್ನು ತಿರುಗಿಸುವ ವೇಳೆ ಮಂಗಳೂರಿನಿಂದ ಕಾಪು ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತದಲ್ಲಿ ಸ್ಕೂಟರಿನ ಹಿಂಭಾಗಕ್ಕೆ ಹಾನಿಯಾಗಿದೆ. ರವಿವಾರ ಇದೇ ಸ್ಥಳದಲ್ಲಿ ಟಿಪ್ಪರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಸುರತ್ಕಲ್ ಉತ್ತರವಲಯ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story