ವಕ್ಫ್ ಕಚೇರಿಗೆ ಆಸ್ತಿ ವಿವರಗಳನ್ನು ಸಲ್ಲಿಸಲು ಸೂಚನೆ
ಮಂಗಳೂರು, ಅ.20: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಸೀದಿ/ಮದ್ರಸ/ದಫನ ಭೂಮಿ, ದರ್ಗಾಗಳ ದಾಖಲೆ ಪತ್ರಗಳನ್ನು ಕ್ರಮಬದ್ಧಗೊಳಿಸುವ ಸಲುವಾಗಿ ಸಂಬಂಧಪಟ್ಟ ವಕ್ಫ್ ಆಸ್ತಿಗಳ ದಾಖಲೆಗಳಾದ ಪಹಣಿ ಪತ್ರ, ಸ್ಥಳದ ನಕ್ಷೆ, ಅನುಭೋಗದಾರರ ಹೆಸರು, ವಕ್ಫ್ ನೋಂದಾವಣೆ ದೃಢಪತ್ರ, ಇತ್ಯಾದಿಗಳನ್ನು ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ್ ಕಚೇರಿಯ ದೂ.ಸಂ.: 0824-2420078ನ್ನು ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story