ಕುಂಬಳೆ : 2.5 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ
ಮಂಜೇಶ್ವರ, ಅ.25: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಪ್ಪಳ ರೈಲ್ವೇ ನಿಲ್ದಾಣ ಸಮೀಪದ ನಿವಾಸಿಗಳಾದ ಮುಹಮ್ಮದ್ ಸಿದ್ದೀಕ್(25), ಬಂದ್ಯೋಡು ಕುಡಾಲ್ ಮೇರ್ಕಳದ ಅಬ್ದುಲ್ಲತೀಫ್ (28) ಎಂದು ಗುರುತಿಸಲಾಗಿದೆ.
ಇವರಿಂದ 2,500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಮಾರಾಟ ನಡೆಯುತ್ತಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್ರಿಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕುಂಬಳೆ ಸಿಐ ಮನೋಜ್, ಕುಂಬಳೆ ಎಸೈ ಮೆಲ್ವಿನ್ ಜೋಸ್ ಪೊಲೀಸರು ಕಾರ್ಯಾಚರಣೆ ನಡೆಸಿದರು.
Next Story