ಮೂಡುಬಿದಿರೆ: ನೀರಿನ ಟ್ಯಾಂಕರ್ ಗೆ ಚಾಲನೆ
ಮೂಡುಬಿದಿರೆ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಮೂಡುಬಿದಿರೆ ಪುರಸಭೆಯು 12 ಲಕ್ಷ ರೂ. ವೆಚ್ಚದಲ್ಲಿ ನೀರಿನ ಟ್ಯಾಂಕರ್ ಅನ್ನು ಖರೀದಿಸಿದ್ದು, ಅದನ್ನು ಸಚಿವ ಕೆ. ಅಭಯಚಂದ್ರ ಜೈನ್ ಜ.2ರಂದು ಬೆಳಗ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಪುರಸಭೆಯ ಅಧ್ಯಕ್ಷೆ ರೂಪ ಸಂತೋಷ್, ಉಪಾಧ್ಯಕ್ಷೆ ಶಕುಂತಳ, ಸ್ಥಳೀಯ ಸಮಿತಿ ಅಧ್ಯಕ್ಷ ಕೊರಗಪ್ಪ, ಆರೋಗ್ಯ ನಿರೀಕ್ಷಕಿ ಇಂದು, ಕಂದಾಯ ನಿರೀಕ್ಷಕ ದನಂಜಯ ಹಾಗೂ ಪುರಸಭೆಯ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.
Next Story