ಕಿನ್ಯ: ಎಸ್ಬಿವಿ ಸಂಘಟನೆಗೆ ಆಯ್ಕೆ
ಮಂಗಳೂರು, ನ.21: ಕಿನ್ಯದ ಕುತುಬಿಯ್ಯ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ ಸುನ್ನಿ ಬಾಲವೇದಿಕೆಯ ಮಹಾಸಭೆಯು ಮುಖ್ಯಶಿಕ್ಷಕ ಫಾರೂಕ್ ದಾರಿಮಿಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಅಲಿ ಹೈದರ್ ಫೈಝಿ ದುಆಗೈದರು. ಹೈದರ್ ಅಲಿ ಮಿಸ್ಬಾಹಿ ಸಭೆ ಉದ್ಘಾಟಿಸಿದರು. ಹನೀಫ್ ದಾರಿಮಿ ವಿಷಯ ಮಂಡಿಸಿದರು.
ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ರಂಶೀದ್, ಪ್ರಧಾನ ಕಾರ್ಯದರ್ಶಿಯಾಗಿ ಶಕೀರ್, ಕೋಶಾಧಿಕಾರಿಯಾಗಿ ದಾವೂದುಲ್ ಹಕೀಂ, ಉಪಾಧ್ಯಕ್ಷರಾಗಿ ಅದ್ನಾನ್, ಹಸನ್, ಆಶಿಕ್, ಜೊತೆ ಕಾರ್ಯದರ್ಶಿಯಾಗಿ ಆಶಿಕ್ ಮುಝಮ್ಮಿಲ್, ತಂಡದ ನಾಯಕರಾಗಿ ಶಾಹಿಖ್, ಸ್ವಾದಿಕ್, ಯೂಸುಫ್, ರೇಂಜ್ ಕೌನ್ಸಿಲರಾಗಿ ನೌಫಲ್, ಸಿನಾನ್, ರಫೀದ್ ಹಾಗು 21 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.
ಎಸ್ಬಿವಿ ಗಲ್ಸ್ ವಿಂಗ್ ನಾಯಕಿಯಾಗಿ ಆಯಿಶಾ, ಉಪನಾಯಕಿಯಾಗಿ ಝಾಕಿಯ್ಯ, ತಂಡದ ನಾಯಕಿಯರಾಗಿ ಸಫೀನಾ, ಶಿಫಾ, ಸಫ್ವಾನಾ ಆಯ್ಕೆಯಾದರು. ಸಭೆಯಲ್ಲಿ ಅಬ್ದುಲ್ ಖಾದಿರ್ ಮುಸ್ಲಿಯಾರ್, ಉಮರ್ ಅಝ್ಹರಿ, ಅಬ್ದುಲ್ಲತೀಫ್ ಅಮಾನಿ, ಇಕ್ಬಾಲ್ ಮುಸ್ಲಿಯಾರ್ ಉಪಸ್ಥಿತರಿದ್ದರು.