ಜೈಲಿನ ಶೌಚಾಲಯದಲ್ಲಿ ಮೊಬೈಲ್ ಪತ್ತೆ
ಮಂಗಳೂರು, ನ.21: ಜಿಲ್ಲಾ ಕಾರಾಗೃಹದ ಶೌಚಾಲಯದಲ್ಲಿ ಸೋಮವಾರ ಅನಾಥ ಮೊಬೈಲೊಂದು ಪತ್ತೆಯಾಗಿದೆ. ಶೌಚಾಲಯದಲ್ಲಿ ಮೊಬೈಲ್ ಇರುವ ಬಗ್ಗೆ ಪತ್ತೆ ಹಚ್ಚಿದ ಸಿಬ್ಬಂದಿ ಬಳಿಕ ಮೇಲಾಧಿಕಾರಿಗಳ ಗಮನಕ್ಕೆ ತಂದರು.
ಅದರಂತೆ ಬರ್ಕೆ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಮೊಬೈಲ್ನ ವಾರಸುದಾರರು ಯಾರು ಎಂಬುದನ್ನು ಪತ್ತೆ ಹಚ್ಚಿ ಆ ಬಳಿಕ ಕ್ರಮ ಜರಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story