ಮಲಗಿದ್ದಲ್ಲೇ ವ್ಯಕ್ತಿ ಮೃತ್ಯು
ಸುಳ್ಯ, ನ.25: ತೊಡಿಕಾನ ಗ್ರಾಮದ ಗುಂಡಿಗದ್ದೆ ಎಂಬಲ್ಲಿ ಕೃಷಿಕರೋರ್ವರು ಮಲಗಿದ್ದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಕೇರಳದ ಜಾಗೋ ಜೋಸೆಫ್ ಎಂಬವರು ಮೃತಪಟ್ಟ ವ್ಯಕ್ತಿ.
ಕೃಷಿಕರಾಗಿದ್ದ ಜೋಸೆಫ್ ತನ್ನ ಮಗಳೊಂದಿಗೆ ಇಲ್ಲೇ ನೆಲಿಸಿದ್ದರು. ಗುರುವಾರ ರಾತ್ರಿ ಮನೆಯಲ್ಲೇ ಮಲಗಿದ್ದ ಜೋಸೆಫ್ರನ್ನು ಶುಕ್ರವಾರ ಬೆಳಗ್ಗೆ ಮನೆಯ ಕೆಲಸದವರು ಒಂದು ಕರೆದಾಗ ಎಚ್ಚರಗೊಳ್ಳಲಿಲ್ಲ. ಕೆಲಸದವರು ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Next Story