ನಾಳೆಯಿಂದ ಎಸೆಸೆಲ್ಸಿ ಪಾಠ ಬಾನುಲಿಯಲ್ಲಿ
ಸಾಂಧರ್ಭಿಕ ಚಿತ್ರ
ಮಂಗಳೂರು, ಡಿ.1: ಮಂಗಳೂರು ಆಕಾಶವಾಣಿ ಕೇಂದ್ರವು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪೂರಕ ಪಾಠಗಳನ್ನು ಡಿ.2ರಿಂದ ಪ್ರತಿ ಶುಕ್ರವಾರ, ಸೋಮವಾರ, ಬುಧವಾರದಂದು ಬೆಳಗ್ಗೆ 9:30ರಿಂದ 10ಗಂಟೆಯವರೆಗೆ ನುರಿತ ಅಧ್ಯಾಪಕರುಗಳಿಂದ ಬಾನುಲಿ ಪಾಠ ಸರಣಿಯನ್ನು ಪ್ರಸಾರ ಮಾಡಲಿದೆ.
ಒಟ್ಟು 42 ಕಂತುಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತ ಕುಮಾರ ಪೆರ್ಲ ತಿಳಿಸಿದ್ದಾರೆ.
Next Story