ಉಳ್ಳಾಲ : ಬದ್ರುಲ್ ಹುದಾ ದಿಂದ ಉಚಿತ ಸಮವಸ್ತ್ರ ವಿತರಣೆ
ಉಳ್ಳಾಲ, ಡಿ.11 : ಬದ್ರುಲ್ ಹುದಾ ಅಸೋಸಿಯೇಶನ್ (ರಿ) ಪಡಿಕ್ಕಲ್ ಕೈರಂಗಳ ಇದರ ವತಿಯಿಂದ ಜಾಮಿಯಾ ಮಸ್ಜೀದ್ರುರ್ಮಾನ್ ಪಡಿಕ್ಕಲ್ ಇದರ 25 ನೇ ವಾರ್ಷಿಕೋತ್ಸವದ ಪ್ರಯುಕ್ತ ತನ್ವೀರುಲ್ ಇಸ್ಲಾಂ ಮದ್ರಸದ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆಯು ಮದ್ರಸ ಹಾಲ್ ನಲ್ಲಿ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಪಿ ಎಚ್ ಹಮೀದ್ ಇಂಜಿನಿಯರ್ ವಹಿಸಿದರು.
ಖತೀಬ್ ನಾಸೀರ್ ಮದನಿ ದು:ಆ ನೆರೆವೇರಿಸಿದರು.
ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಅಬ್ಬಾಸ್ ಬರೆ, ಬದ್ರುಲ್ ಹುದಾ ಅಸೋಸಿಯೇಶನ್ ಅಧ್ಯಕ್ಷ ಪೈಝಲ್ ಪಡಿಕ್ಕಲ್, ಗೌರವಾಧ್ಯಕ್ಷ ಇಬ್ರಾಹಿಂ ಡಿ ಎಚ್, ಟಿ.ಕೆ ಇಸ್ಮಾಯಿಲ್, ಹನೀಫ್ ಎಚ್ ಕಲ್ಲು, ಮುಅಲ್ಲಿಮ್ ಮಜೀದ್ ಮುಸ್ಲಿಯಾರ್, ಬಾವು ಹಾಜಿ ಪಡಿಕ್ಕಲ್ ಮತ್ತೀತರು ಉಪಸ್ಥಿತರಿದ್ದರು.
Next Story