ನಕಲಿ ಮರಳು ಪಾಸ್ ತಯಾರಿ ಕೇಂದ್ರಕ್ಕೆ ದಾಳಿ
3 ಕಂಪ್ಯೂಟರ್, 2 ಪ್ರಿಂಟರ್ ವಶ
ಮಂಜೇಶ್ವರ, ಡಿ.15: ಕಾಸರಗೋಡು ಪ್ರದೇಶ ವನ್ನು ಕೇಂದ್ರೀಕರಿಸಿ ವ್ಯಾಪಕ ನಕಲಿ ಮರಳು ಪಾಸ್ ತಯಾರಿಸುತ್ತಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ಸಾಬೀತು ಗೊಂಡಿದೆ.
ಈ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸ್ ತಂಡ ಜಿಲ್ಲೆಯ 20 ಸ್ಥಳಗಳಿಗೆ ಬುಧವಾರ ದಾಳಿ ನಡೆಸಿ ಮೂರು ಕಂಪ್ಯೂಟರ್ ಹಾಗೂ ಎರಡು ಪ್ರಿಂಟರ್ಗಳನ್ನು ವಶಪಡಿಸಿಕೊಂಡಿದೆ. ಆದರೆ ದಾಳಿ ಯಲ್ಲಿ ಯಾರನ್ನೂ ಬಂಧಿಸಲು ಸಾಧ್ಯ ವಾಗಲಿಲ್ಲ.
ರಾಜ್ಯದಲ್ಲಿ ಮರಳು ಸಂಗ್ರಹ ಹಾಗೂ ಸಾಗಾಟಕ್ಕೆ ನಿಯಂತ್ರಣ ಮಾಡಿದ ಬಳಿಕ ವ್ಯಾಪಕವಾಗಿ ನಕಲಿ ಪಾಸ್ ತಯಾರಿಸಿ ಮರಳು ಸಾಗಿಸುವ ತಂಡ ಜಿಲ್ಲೆಯಲ್ಲಿ ಸಕ್ರಿಯಗೊಂಡಿದೆ. ಜಿಲ್ಲೆಯ ವಿವಿಧ ಹೊಳೆ ಹಾಗೂ ಸಮುದ್ರದಿಂದ ವ್ಯಾಪಕವಾಗಿ ಮರಳು ಸಂಗ್ರಹಿಸಿ ಸಾಗಿಸುತ್ತಿರುವುದರ ಹಿಂದೆ ಬೃಹತ್ ಮಾಫಿಯಾಗಳು ಕಾರ್ಯಾ ಚರಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story