ಸುರತ್ಕಲ್ ವ್ಯಾಪ್ತಿಯಲ್ಲಿ ಗಾಂಜಾ ದಂಧೆ: ಸ್ಪಷ್ಟೀಕರಣ
ಸುರತ್ಕಲ್ ಡಿ.18: ಸುರತ್ಕಲ್ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಗಾಂಜಾ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಕುರಿತು ವಾರ್ತಾ ಭಾರತಿ.ಇನ್ ರವಿವಾರ ಸಂಜೆ ವರದಿಯೊಂದನ್ನು ಪ್ರಕಟಿಸಿತ್ತು.
ಈ ವರದಿಯಲ್ಲಿ ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ದ.ಕ.ಜಿ.ಪಂ. ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಚಿತ್ರ ಪ್ರಕಟವಾಗಿತ್ತು.
ಆದರೆ, ಈ ಶಾಲೆಯ ವಠಾರದಲ್ಲಿ ಅಂತಹಾ ಯಾವುದೇ ಚಟುವಟುಕೆ ನಡೆಯುತ್ತಿಲ್ಲ ಎಂದು ಸ್ಥಳೀಯತರು ವೆಬ್ ಸೆಟನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ವರದಿಯಲ್ಲಿ ಪ್ರಕಟವಾಗಿರುವ ಚಿತ್ರದಲ್ಲಿರುವ ಕಟ್ಟದಲ್ಲಿ ಅಂಜುಮನ್ ಸಿರಾಜುಲ್ ಇಸ್ಲಾಂ ಮದರಸ ಕೂಡಾ ನಡೆಯುತ್ತಿದ್ದು, ಇಲ್ಲಿ ಅಂತಹಾ ಯಾವುದೇ ಚಟುವಟುಕೆ ನಡೆಯುತ್ತಿಲ್ಲ ಎಂದು ಆಡಳಿತ ಸಮಿತಿ ಸದಸ್ಯ ಮುಹಮ್ಮದ್ ಅಲಿ ಎಂಬವರು ತಿಳಿಸಿದ್ದಾರೆ.
Next Story