ಉಡುಪಿಯಲ್ಲಿ ಸೇನಾ ನೇಮಕಾತಿ
ಉಡುಪಿ, ಡಿ.23: ವಿಜಯಪುರ ಜಿಲ್ಲೆಯ ಸೈನಿಕ ಶಾಲೆ ಮೈದಾನದಲ್ಲಿ 2017ರ ಮೇ ತಿಂಗಳ 2ನೇ ವಾರದಲ್ಲಿ ಸಿಪಾಯಿ ಜೆಡಿ, ಸಿಪಾಯಿ ಟೆಕ್ನಿಕಲ್, ಸಿಪಾಯಿ ನರ್ಸಿಂಗ್ ಅಸಿಸ್ಟೆಂಟ್, ಸಿಪಾಯಿ ಕ್ಲರ್ಕ್, ಸಿಪಾಯಿ ಟ್ರೇಡ್ಸ್ಮನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಆನ್ಲೈನ್ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ಲೈನ್ ನೊಂದಣಿ ಪ್ರಕ್ರಿಯೆ 2017ರ ಮಾರ್ಚ್ ತಿಂಗಳ 2ನೇ ವಾರದಲ್ಲಿ ಪ್ರಾರಂಭಗೊಳ್ಳಲಿದ್ದು, ಹೆಚ್ಚಿನ ಮಾಹಿತಿಗೆ ಎಆರ್ಓ ಮಂಗಳೂರು (ದೂರವಾಣಿ:0824-2458376) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story