ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನಿಂದ ಮೌಲವಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ
ಮಂಗಳೂರು, ಜ 3 : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮೌಲವಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡುವ ಸಲುವಾಗಿ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇಂದು ಅತ್ಯಂತ ಬೇಡಿಕೆಯಿರುವ ಕೊರಾಲ್ ಡ್ರಾ, ಫೊಟೋಶಾಪ್ ಮತ್ತು ಕಂಪ್ಯೂಟರ್ ಬೇಸಿಕ್ ತರಬೇತಿಯನ್ನು ನುರಿತ ತರಬೇತುದಾರರಿಂದ ನೀಡಲಾಗುವುದು. ಮದ್ರಸ ಅಧ್ಯಾಪಕರು ಮತ್ತು ಮಸೀದಿಯ ಇಮಾಮರು ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಲು ಈ ತರಬೇತಿಯು ತುಂಬಾ ಸಹಕಾರಿಯಾಗಲಿದೆ. ಆದುದರಿಂದ ಸದರಿ ಉಚಿತ ತರಬೇತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ-ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್. ವಿಶ್ವಾಸ್ ಕ್ರೌನ್, ಕಂಕನಾಡಿ, ಮಂಗಳೂರು-2, ದೂರವಾಣಿ: 0824-4267883, 9972283365
Next Story