ಯುಎಇ ಯ ಪ್ರಮುಖ ಉದ್ಯಮಿ ಡಾ.ಶಮ್ಸೀರ್ ಅಲ್ ಮದೀನಕ್ಕೆ ಭೇಟಿ
ಮುಡಿಪು , ಜ.4 : ಯುಎಇಯ ಪ್ರಮುಖ ಉದ್ಯಮಿ, ಅನಿವಾಸಿ ಭಾರತೀಯ ಹಾಗೂ ಪ್ರತಿಷ್ಠಿತ ವಿಪಿಎಸ್ ಹೆಲ್ತ್ ಗ್ರೂಪಿನ ಸ್ಥಾಪಕ ಹಾಗೂ ನಿರ್ದೇಶಕ ಡಾ.ಶಮ್ಸೀರ್ ವಯಲಿಲ್ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ಗೆ ಭೇಟಿ ನೀಡಿದರು.
ಜೊತೆಯಲ್ಲಿ ಯುಎಇ ಖಲೀಜ್ ಫೌಂಡೇಶನ್ ಚೆಯರ್ಮಾನ್ ಮುಹಮ್ಮದ್ ಅಬ್ದುಲ್ಲ ಹುಸೈನ್ ಅಲ್ ಖೂರಿ, ಅಬ್ದುಲ್ಲ ಮುಹಮ್ಮದ್ ಅಬ್ದುಲ್ಲ ಅಲ್ ಖೂರಿ, ಯೂನುಸ್ ಅಬ್ದುಲ್ಲ ಅಲ್ ಹುಸೈನ್ ಅಲ್ ಖೂರಿ, ಇಮ್ರಾನ್ ಮುಹಮ್ಮದ್ ಸಾಲಿಹ್ ಮಹಮೂದ್ ಹುಸೈನ್ ಅಲ್ ಖೂರಿ, ರಾಜೀವ್ ಗಾಂಧಿ ಯೂನಿವರ್ಸಿಟಿ ಸೆನೆಟ್ ಸದಸ್ಯ ಡಾ ಯು.ಟಿ. ಇಫ್ತಿಕಾರ್ ಅಲಿ ಉಪಸ್ಥಿತರಿದ್ದರು.
ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅತಿಥಿಗಳನ್ನು ಬರಮಾಡಿಕೊಂಡರು.
ನಂತರ ನಡೆದ ಸ್ವೀಕರಣಾ ಸಮಾರಂಭದಲ್ಲಿ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿ ಸ್ವಾಗತಿಸಿದರು.
ಮೂಸ ಸಖಾಫಿ ಕ್ಯಾಲಿಕಟ್ ದಿಕ್ಸೂಚಿ ಭಾಷಣ ಮಾಡಿದರು.
ನೂತನ ಶಾಲಾ ಕಟ್ಟಡಕ್ಕೆ ಡಾ ಶಮ್ಸೀರ್ ವಯಲಿಲ್ ಶಿಲಾನ್ಯಾಸ ನೆರವೇರಿಸಿದರು.
ಶಾಲಾ ಸಮಿತಿ ಚೆಯರ್ಮಾನ್ ಸಾದುಕುಂಞಿ ಮಾಸ್ಟರ್, ಎನ್.ಎಸ್.ಕರೀಂ, ಎಸ್.ಕೆ. ಖಾದಿರ್ ಹಾಜಿ ಮುಡಿಪು, ಅಬ್ದುಲ್ಲ ಮೋರ್ಲ, ಶೌಕತ್ , ಕುಂಞಿ ಬಾವ ಕಲ್ಕಟ್ಟ ಮುಂತಾದವರು ಉಪಸ್ಥಿತರಿದ್ದರು.
ಮುಹಮ್ಮದ್ ಸ್ವರೂಫ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಾಂಶುಪಾಲ ಯೂನುಸ್ ಅಹ್ಸನಿ ಧನ್ಯವಾದವಿತ್ತರು.