ವಿನಾಯಕ ಬಾಳಿಗ ತಾಯಿ ಲಕ್ಷ್ಮಿ ಬಾಳಿಗ ತೀವ್ರ ಅಸ್ವಸ್ಥ
ಮಂಗಳೂರು, ಜ.8: ವಿನಾಯಕ ಬಾಳಿಗ ತಾಯಿ ಅಸೌಖ್ಯದಿಂದ ಕುಸಿದು ಬಿದ್ದು ಅಸ್ವಸ್ಥಗೊಂಡಿರುವ ಘಟನೆ ವರದಿಯಾಗಿದೆ.
ಪುತ್ರನ ಹತ್ಯೆಯಾದ ಬಳಿಕ ಖಿನ್ನರಾಗಿದ್ದ ತಾಯಿ ಕುಸಿದು ಬಿದ್ದು ತಲೆಗೆ ಏಟಾಗಿದ್ದು, ಮೆದುಳಿನ ರಕ್ತಸ್ರಾವ ಆಗಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿನಾಯಕ ಬಾಳಿಗ ಮಂಗಳೂರಿನ ಆರ್ ಟಿಐ ಕಾರ್ಯಕರ್ತರಾಗಿದ್ದರು. ಕಳೆದ ಮಾರ್ಚ್ 21ರಂದು ಮುಂಜಾನೆ ಇವರ ಹತ್ಯೆಯಾಗಿತ್ತು.
Next Story