ಮುಲ್ಕಿ: ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಜಯ
ಮುಲ್ಕಿ, ಜ.14: ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮುಲ್ಕಿ ಹೋಬಳಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಜಯ ಸಾಸಿದೆ.
ಮುಲ್ಕಿ ಹೋಬಳಿಯ ಒಂದನೆ ವಾರ್ಡ್ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೋಯಲ್ ಡಿಸೋಜ, ಎದುರಾಳಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರವೀಂದ್ರ ಶೆಟ್ಟಿ ಅವರನ್ನು ಭರ್ಜರಿಯಾಗಿ ಸೋಲಿಸಿದ್ದಾರೆ.
ಮುಲ್ಕಿ ಹೋಬಳಿಯ ಎರಡನೆ ವಾರ್ಡಿನಿಂದ ಸ್ಪರ್ಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಮೋದ್ ಕುಮಾರ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಭಾಕರ ಶೆಟ್ಟಿ ಅವರನ್ನು ಸೋಲಿಸಿ ತಮ್ಮ ಎರಡನೆ ಅವಗೆ ಆಯ್ಕೆಯಾದರು.
Next Story