ಪಿಕ್ ಪಾಕೆಟ್: ಆರೋಪಿ ಬಂಧನ
ಉಪ್ಪಿನಂಗಡಿ, ಜ.15: ಇಲ್ಲಿನ ಬಸ್ನಿಲ್ದಾಣದ ಪರಿಸರದಲ್ಲಿ ಪಿಕ್ಪಾಕೆಟ್ ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯೋರ್ವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ರವಿವಾರ ಉಪ್ಪಿನಂಗಡಿಯಿಂದ ವರದಿಯಾಗಿದೆ. ಆರೋಪಿತರನ್ನು ಬೆಳ್ತಂಗಡಿ ತಾಲೂಕಿನ ಕರಾಯದ ನಸೀಮಾ (23)ಎಂದು ತಿಳಿದು ಬಂದಿದೆ. ಈಕೆ ಕೊಯಿಲ ಗ್ರಾಮದ ಕೊನೆಮಜಲು ನಿವಾಸಿ ಯಮುನಾ ಎಂಬವರು ಉಪ್ಪಿನಂಗಡಿಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಾಗ ನಸೀಮಾ ಅವರ ಬ್ಯಾಗಿಗೆ ಕೈ ಹಾಕಿ ಬ್ಯಾಗಿನಲ್ಲಿದ್ದ 750 ರೂ. ಎಗರಿಸಿದ್ದರೆನ್ನಲಾಗಿದೆ.
ಇದನ್ನು ಗಮನಿಸಿದ ಯಮುನಾ, ಅಲ್ಲಿಂದ ಪರಾರಿಯಾಗಲೆತ್ನಿಸಿದ ನಸೀಮಾಳನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ವಿಚಾರಣೆಯ ವೇಳೆ ಈ ಹಿಂದೆ ಹಲವು ಬಾರಿ ಪಿಕ್ ಪಾಕೆಟ್ ಮಾಡಿರುವುದನ್ನು ನಸೀಮಾ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
Next Story