12: ಪುತ್ತೂರು ನಗರಸಭೆಯ ಆರು ವಾರ್ಡ್ಗಳಿಗೆ ಉಪಚುನಾವಣೆ
ಪುತ್ತೂರು, ಜ.18: ಕಳೆದ 8 ತಿಂಗಳಿನಿಂದ ತೆರವಾಗಿರುವ ಪುತ್ತೂರು ನಗರಸಭೆಯ ಆರು ವಾರ್ಡ್ಗಳಿಗೆ ೆ.12ರಂದು ಉಪಚುನಾವಣೆ ನಿಗದಿಪಡಿಸಲಾಗಿತ್ತು. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ. ಪುತ್ತೂರು ನಗರಸಭೆಯ ವಾರ್ಡ್ ನಂ. 6(ಚಿಕ್ಕಮುಡ್ನೂರು), ವಾರ್ಡ್ ನಂ. 16 (ಮೊಟ್ಟೆತ್ತಡ್ಕ), ವಾರ್ಡ್ ನಂ. 19(ಪರ್ಲಡ್ಕ), ವಾರ್ಡ್ ನಂ. 16 (ತೆಂಕಿಲ) ಹಾಗೂ ವಾರ್ಡ್ ನಂ. 12.12 (ಸಾಮೆತ್ತಡ್ಕ) ಕ್ಷೇತ್ರಗಳಿಗೆ ಮರು ಮತದಾನ ನಡೆಯಲಿದೆ. ೆ.1ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ೆ.2ರಂದು ನಾಮಪತ್ರ ಗಳ ಪರಿಶೀಲನೆ ನಡೆಯಲಿದೆ. ೆ.4ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ೆ.12ರಂದು ಮತದಾನ ನಡೆಯಲಿದೆ. ಮರುಮತದಾನದ ಅಗತ್ಯ ವಿದ್ದಲ್ಲಿ ೆ.14ರಂದು ನಡೆಯಲಿದೆ. ೆ.15ರಂದು ಮತ ಎಣಿಕೆ ನಡೆಯಲಿದೆ. ಕಳೆದ ಸುಮಾರು 8 ತಿಂಗಳ ಹಿಂದೆ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣಕ್ಕೆ ಈ 6 ಕ್ಷೇತ್ರಗಳ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸದಸ್ಯತ್ವ ರದ್ದಾಗಿತ್ತು.
Next Story