ಕಿನ್ನಿಗೋಳಿ : ಗುಡ್ಡಕ್ಕೆ ಬೆಂಕಿ
ಕಿನ್ನಿಗೋಳಿ, ಜ.23: ಇಲ್ಲಿಗೆ ಸಮೀಪದ ದಾಮಸ್ಕಟ್ಟೆ ಕೋಲ್ಬೆಟ್ಟು ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 10 ಎಕ್ಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ.
ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ತಕ್ಷಣ ಸ್ಥಳಿಯರು ಮೂಡಬಿದಿರೆ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದರು. ಆದರೆ, ಮೂಡಬಿದ್ರೆ ಅಗ್ನಿ ಶಾಮಕ ದಳದವರು ಬೇರೆ ಕಡೆ ಹೋಗಿದ್ದ ಕಾರಣ ಸ್ಥಳಕ್ಕೆ ಬರಲಾಗದ ಕಾರಣ ಸ್ಥಳಿರು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
Next Story