ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಮನಾರುಲ್ ಇಸ್ಲಾಮಿಯ ಹಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಬಂಟ್ವಾಳ, ಜ. 28: ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಮನಾರುಲ್ ಇಸ್ಲಾಮಿಯ ಹಿ.ಪ್ರಾ.ಶಾಲೆಯಲ್ಲಿ 68ನೆ ಗಣರಾಜ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಶಾಲಾ ಸಂಚಾಲಕ ಹಾಜಿ ಮುಹಮ್ಮದಾಲಿ ಎ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂಜಿನಿಯರ್ಗಳಾದ ಶೇಖ್ ಅಲಿ ಮತ್ತು ರಿಯಾರ್ ಧ್ವಜಾರೋಹಣಗೈದರು. ಶಾಲಾ ಕಾರ್ಯದರ್ಶಿ ಹಾಜಿ ಬಿ.ಎ.ಮುಹಮ್ಮದ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಾಲಾ ಅಧ್ಯಕ್ಷ ಹಾಜಿ ಬಿ.ಎ.ಸುಲೈಮಾನ್, ಕೆಳಗಿನಪೇಟೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯೀಲ್, ಪಿಟಿಎ ಅಧ್ಯಕ್ಷ ಶಬೀರ್ ಅಹ್ಮದ್, ಕೋಶಾಧಿಕಾರಿ ಇಲ್ಯಾಸ್, ಶಾಲಾ ಮುಖ್ಯೋಪಾಧ್ಯಾಯಿನಿ ಮೆಟಿಲ್ಡಾ ಡಿಕೋಸ್ತಾ, ಮಮತಾ ಸುವರ್ಣ, ಮನಾರುಲ್ ಶಾಲಾ ಮುಖ್ಯೋಪಾಧ್ಯಾಯಿನಿ ಲಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಸಹಕರಿಸಿದರು. ವಿದ್ಯಾರ್ಥಿಗಳಾದ ಫಾಝಿಲ್ ಸ್ವಾಗತಿಸಿದರು.ನಬ್ಲ ವಂದಿಸಿದರು. ರಶ್ಮ ಕಾರ್ಯಕ್ರಮ ನಿರೂಪಿಸಿದರು.
Next Story