ಉಳ್ಳಾಲ :ಬ್ಯಾರಿಕೇಡ್ ಗೆ ಬೈಕ್ ಢಿಕ್ಕಿ , ಸವಾರ ಸಾವು
ಉಳ್ಳಾಲ , ಜ . 31 : ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದಿಲ್ಲಿ ನಡೆದಿದೆ.
ಮೃತರನ್ನು ಬಸ್ ನಿರ್ವಾಹಕ ಇಮ್ರಾನ್ (30) ಎಂದು ಗುರುತಿಸಲಾಗಿದೆ.
ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಉಳ್ಳಾಲ ಬೈಲಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story