1,200 ಗ್ರಾಂ ಗಾಂಜಾದೊಂದಿಗೆ ಯುವಕನ ಸೆರೆ
ಮಂಜೇಶ್ವರ, ಫೆ.10: 1200 ಗ್ರಾಂ ಗಾಂಜಾದೊಂದಿಗೆ ಯುವಕನೋರ್ವನನ್ನು ಆಟೋ ರಿಕ್ಷಾದೊಂದಿಗೆ ಮಂಜೇಶ್ವರ ಪೋಲೀಸರು ಬಂಧಿಸಿದ್ದಾರೆ.
ಚೆರುಗೋಳಿಯ ನಾಸಿರ್(20) ಬಂಧಿತ ಆರೋಪಿ. ಮಂಜೇಶ್ವರ ಹೆಚ್ಚುವರಿ ಸಬ್ ಇನ್ಸ್ಪೆಕ್ಟರ್ ಜೋಸ್ ನೇತೃತ್ವದ ಪೊಲೀಸರು ಗುರುವಾರ ಸಂಜೆ ಕುಂಜತ್ತೂರು ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆಟೋ ರಿಕ್ಷಾವೊಂದು ನಿಲ್ಲಿಸದೆ ಪರಾರಿಯಾಗಲೆತ್ನಿಸಿತು. ಬೆನ್ನಟ್ಟಿದ ಪೊಲೀಸರು ರಿಕ್ಷಾವನ್ನು ಮಾಡ ಬಳಿ ವಶಕ್ಕೆ ತೆಗೆದುಕೊಂಡು ತಪಾಸಣೆ ನಡೆಸಿದಾಗ 1,200 ಗ್ರಾಂ ಗಾಂಜಾ ಪತ್ತೆಯಾಗಿದೆ. ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಾಸಿರ್ 5 ಕಳವು ಪ್ರಕರಣಗಳ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಉಳ್ಳಾಲ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲಿನಿಂದ ಕೆಳವು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
Next Story