ಮಂಗಳೂರು: ಒಂದು ತಿಂಗಳ ಒಳಗೆ ಸುರತ್ಕಲ್ನಲ್ಲಿ ಪೂರ್ಣ ಪ್ರಮಾಣದ ಆರ್ಟಿ ಓ ಕಚೇರಿ
ಮಂಗಳೂರು,ಫೆ.16:ಸುರತ್ಕಲ್ ನಲ್ಲಿ ಒಂದು ತಿಂಗಳ ಒಳಗೆ ಆರ್ಟಿಓ ಕಚೇರಿ ಆರಂಭವಾಗಲಿದೆ ಎಂದು ಮಂಗಳೂರು ಉತ್ತರ ವಿಧಾನ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ರಾಜ್ಯದಲ್ಲಿ ಹೊಸ ಆರ್ಟಿಓ ಕಚೇರಿ ನಿರ್ಮಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿತ್ತು.ಆ ಪ್ರಕಾರ ಸುರತ್ಕಲ್ನಲ್ಲಿ ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಸಾರಿಗೆ ಅಧಿಕಾರಿ ಕಚೇರಿ ಆರಂಭವಾಗಲಿದೆ ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
ಈ ಹಿಂದಿನ ಬಜೆಟ್ನಲ್ಲಿ ತೀರ್ಮಾನಿಸಿದ ಪ್ರಕಾರ ದಾಂಡೇಲಿ ಹಾಗೂ ಸುರತ್ಕಲ್ನಲ್ಲಿ ಆರ್ಟಿ ಓ ಕಚೇರಿ ಆರಂಭಿಸಲು ನಿರ್ಧರಿಸಲಾಗಿತ್ತು.ದಾಂಡೇಲಿಯಲ್ಲಿ ಆರಂಭವಾಗಿದೆ .ಸುರತ್ಕಲ್ನಲ್ಲಿ ಸ್ಥಳದ ಸಮಸ್ಯೆ ಇತ್ತು ಈಗ ಸಮಸ್ಯೆ ಪರಿಹಾರವಾಗಿದೆ .ಮೂಲ್ಕಿ,ಮೂಡುಬಿದಿರೆ ಮತ್ತು ಸುರತ್ಕಲ್ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಆರ್ಟಿಓ ಕ್ಯಾಂಪ್ ಆಗುತ್ತಿತ್ತು ಇನ್ನು ಮುಂದೆ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ಶಿವಮೊಗ್ಗದ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿಯೂ ಎಆರ್ಟಿಓ ಕಚೇರಿ ಆರಂಭಿಸಲು ದೊರೆತಿದೆ ಎಂದು ಶಿವರಾಜ್ ಪಟೇಲ್ ತಿಳಿಸಿದ್ದಾರೆ.